Thursday, May 13, 2021
Inspector ವಿಕ್ರಂ (2021, Kannada)
ಇತ್ತೀಚೆಗಿನ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಸಿನಿಮಾದೊಳಗೆ ಕಾಣಿಸಿಕೊಳ್ಳುತ್ತಿರುವ ರೀತಿ ಇಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ರೀತಿ ಪ್ರಜ್ವಲ್ ಬೆಳೆಯುತ್ತಿದ್ದಾರೆ ಅನ್ನುವುದರಲ್ಲಿ ಸಂದೇಹವಿಲ್ಲ. ಕಳೆದ ವರ್ಷ ಬಂದಿದ್ದ "ಜಂಟಲ್‍ಮ್ಯಾನ್" ಸಿನಿಮಾದಲ್ಲೂ ಇಷ್ಟವಾಗಿದ್ದರು.
"Inspector ವಿಕ್ರಂ" ಸಿನಿಮಾದಲ್ಲಿ ಇಡೀ ಸಿನಿಮಾ ಹಾಸ್ಯ ಮತ್ತು Action Sequenceಗಳಿಂದ ತುಂಬಿಕೊಂಡಿತ್ತು. ಆದರೆ ಹಾಸ್ಯವಿರುವಾಗ ಕಥೆ ಮುಂದಕ್ಕೆ ಹೋಗುವುದೇ ಇಲ್ಲ. ಮತ್ತು ಉಳಿದ ಜಾಗದಲ್ಲಿ ಕಥೆ ಹೇಳಲು ಪ್ರಯತ್ನಿಸಲಾಗಿದೆ. ನನ್ನ ಅನಿಸಿಕೆಯ ಪ್ರಕಾರ ಸಿನಿಮಾದ ಆರಂಭದಲ್ಲೇ ಖಳನಾಯಕನನ್ನು ತೋರಿಸುವ ಬದಲು ಕಡೆಯಲ್ಲಿ ತೋರಿಸಿ, ಅದರಂತೆ ಕಥೆಯನ್ನು ಬದಲಾಯಿಸಿಕೊಂಡಿದ್ದರೆ, ಸಸ್ಪೆನ್ಸ್ ಥ್ರಿಲ್ಲರ್ ಕಥಾಶೈಲಿಯಲ್ಲಿ ಸಿನಿಮಾ ಇನ್ನೂ Crisp ಆಗುತ್ತಿತ್ತೇನೋ! ಮೊದಲೇ ನಮಗೆ ಖಳನಾಯಕ ಯಾರು ಅಂತ ಗೊತ್ತಾಗುವುದರಿಂದ ಮತ್ತು ಮಧ್ಯೆ ಬರುವ ಹಾಸ್ಯದ ದೃಶ್ಯಗಳು ಮೂಲ ಎಳೆಯ ಗಂಭೀರತೆಯನ್ನು ಹಾಳುಮಾಡುವುದರಿಂದ ಒಟ್ಟಾರೆಯಾಗಿ ಏನೋ ಮಿಸ್ ಆಗಿದೆ ಅನ್ನಿಸಿತು. ಹೊಡೆದಾಟದ ದೃಶ್ಯಗಳು, ಹಿನ್ನೆಲೆ ಸಂಗೀತ, ಸಂಭಾಷಣೆ ಚೆನ್ನಾಗಿದ್ದವು!
ಭಾವನಾ ತುಂಬಾ ಚುರುಕಾಗಿ ನಟಿಸಿದ್ದಾರೆ. ಬೇರೆ ಭಾಷೆಯವರೆಂದು ಹೇಳಲು ಕಷ್ಟ. ಡಿ'ಬಾಸ್ ದರ್ಶನ್ ರವರ Cameo appearance ಸಹಜವಾಗಿ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ತುಂಬಾ ಇಷ್ಟವಾಗಿದ್ದು ಖಳನಾಯಕನ ಪಾತ್ರದಲ್ಲಿ ಬಂದ ರಘು ಮುಖರ್ಜಿ (Raghu Mukherjee) ತಮ್ಮ ಧ್ವನಿ ಮತ್ತು ಗಂಭೀರ ಲುಕ್‍ನಲ್ಲಿ ಸಕತ್ತಾಗಿ ಕಾಣುತ್ತಾರೆ. ಅವರು ಪಾತ್ರ ನಿರ್ವಹಿಸಿದ ರೀತಿ ಸಿನಿಮಾಗೊಂದು ಪ್ಲಸ್ ಪಾಯಿಂಟ್. ಖಂಡಿತ ನಮ್ಮ ಚಿತ್ರರಂಗ ಅವರಿಗೆ ಒಳ್ಳೆಯ ಪಾತ್ರಗಳನ್ನು ಕೊಟ್ಟು ಬಳಸಿಕೊಳ್ಳಲಿ.
-Santhosh Kumar LM
13-May-2021
Subscribe to:
Post Comments (Atom)
ಈ ಚಿತ್ರ ನನಗೂ ಇಷ್ಟವಾಯಿತು ಸಾರ್.
ReplyDelete