1958ರಲ್ಲಿ ತೆರೆಗೆ ಬಂದ Psychological thriller movie. ಈ ಸಿನಿಮಾವನ್ನು ನಿರ್ದೇಶಿಸಿದವರು ಖ್ಯಾತ ನಿರ್ದೇಶಕ Alfred Hitchcock.
"ಜಾನ್ ಸ್ಕಾಟ್ಟೀ" ಡಿಟೆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಆದ ಅಚಾತುರ್ಯದಲ್ಲಿ ತನ್ನೆದುರಲ್ಲೇ ತುಂಬಾ heightನಿಂದ ಬಿದ್ದ ಪೊಲೀಸ್ ಅಧಿಕಾರಿಯನ್ನು ನೋಡಿ ಈತನಿಗೆ height ಎಂದರೆ ಭಯ ಶುರುವಾಗಿಬಿಡುತ್ತದೆ. ಅದರಿಂದ ಹೊರಬರುವುದೇ ಕಷ್ಟವಾಗಿ ಕೆಲಸದಿಂದಲೇ ನಿವೃತ್ತಿ ಪಡೆಯುವ ನಿರ್ಧಾರ ಮಾಡುತ್ತಾನೆ.
ಅದೇ ಸಮಯಕ್ಕೆ ಆತನ ಕಾಲೇಜು ಗೆಳೆಯ "ಗ್ಯಾವಿನ್ ಎಲ್ಸ್ಟರ್" ಈತನಿಗೊಂದು ಕೆಲಸ ಒಪ್ಪಿಸುತ್ತಾನೆ. ಆತನ ಹೆಂಡತಿ ಇತ್ತೀಚಿಗೆ ವಿಚಿತ್ರವಾಗಿ ವರ್ತಿಸುತ್ತಿರುತ್ತಾಳೆ. ಅವಳ ಮನಸ್ಥಿತಿಯು ಸರಿಯಿರುವುದಿಲ್ಲ. ಅವಳನ್ನು ಹಿಂಬಾಲಿಸಿ ಅವಳ ಸಮಸ್ಯೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಅನ್ನುವುದೇ ಎಲ್ಸ್ಟರ್ ಕೊಡುವ ಕೆಲಸ. ಜಾನ್‍ಗೆ ಈ ಕೆಲಸ ಇಷ್ಟವಿಲ್ಲದಿದ್ದರೂ ನಂಬುಗೆಯ ಮೇಲೆ ಗೆಳೆಯ ಕೊಡುತ್ತಿರುವ ಕೆಲಸ ಅಂತ ಒಪ್ಪಿಕೊಳ್ಳುತ್ತಾನೆ.
ಅವಳು ಎಲ್ಲೆಲ್ಲಿ ಹೋಗುತ್ತಾಳೋ ಅಲ್ಲಿಗೆ ಅವಳನ್ನು ಹಿಂಬಾಲಿಸಿ ಅವಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಮೊದಲು ಆಕೆ ಒಂದು ಅಂಗಡಿಗೆ ಹೋಗಿ ಹೂಗುಚ್ಛವನ್ನು ಕೊಂಡುಕೊಳ್ಳುತ್ತಾಳೆ. ನಂತರ ಒಂದು ಸ್ಮಶಾನಕ್ಕೆ ಹೋಗಿ ಅಲ್ಲಿನ ಒಂದು ಸಮಾಧಿಯ ಮುಂದೆ ಆ ಹೂಗುಚ್ಛವನ್ನು ಇಟ್ಟು ಹೋಗುತ್ತಾಳೆ. ನಂತರ ಅಲ್ಲಿಂದ ಒಂದು ಮ್ಯೂಸಿಯಮ್ಮಿಗೆ ಹೋಗಿ ಒಂದು ದೊಡ್ಡ ಪೇಂಟಿಂಗ್‍ನ ಮುಂದೆ ತುಂಬಾ ಹೊತ್ತು ಅದನ್ನೇ ನೋಡುತ್ತ ಕುಳಿತುಕೊಳ್ಳುತ್ತಾಳೆ. ಅದೊಂದು ಸುಂದರ ಹುಡುಗಿಯ ಪೇಂಟಿಂಗ್.
ಅಚ್ಚರಿಯೆಂದರೆ ಆ ಸಮಾಧಿಯ ಮೇಲಿದ್ದ ಹೆಸರು ಮತ್ತು ಈ ಮ್ಯೂಸಿಯಮ್ಮಿನ ಪೇಂಟಿಂಗ್‍ನೊಳಗಿನ ಹುಡುಗಿಯ ಹೆಸರು ಒಂದೇ ಆಗಿರುತ್ತದೆ. ಇನ್ನೂ ಗಮನಿಸಿದಾಗ ಆ ಪೇಂಟಿಂಗ್‍ನಲ್ಲಿದ್ದ ಹುಡುಗಿಯಂತೆಯೇ ಈಕೆಯೂ ಬಟ್ಟೆ ಧರಿಸುತ್ತಾಳೆ. ಅವಳಂತೆಯೇ ಕೂದಲನ್ನು ಸಿಂಗರಿಸಿಕೊಳ್ಳುತ್ತಾಳೆ. ಅವಳಂತೆಯೇ ಆಭರಣ ತೊಡುತ್ತಾಳೆ. ಜಾನ್ ವಿಚಾರಿಸಿದಾಗ ಆ ಪೇಂಟಿಂಗ್‍ನ ಹುಡುಗಿ ಸತ್ತು ಶತಮಾನವೇ ಆಗಿದೆ ಅಂತ ಗೊತ್ತಾಗುತ್ತದೆ.
ಅಲ್ಲಿಂದ ಮುಂದೆ ಹೋಗಿ ಆ ಹುಡುಗಿ ಹಿಂದೆ ತಂಗುತ್ತಿದ್ದ ಹೋಟೆಲ್ಲಿನಲ್ಲೇ ಸ್ವಲ್ಪ ಹೊತ್ತು ಕಳೆದು ಮನೆಗೆ ವಾಪಸ್ಸು ಹೋಗುತ್ತಾಳೆ. ಇವೆಲ್ಲವನ್ನೂ ಗಮನಿಸಿದಾಗ ಆ ಪೇಂಟಿಂಗ್‍ನ ಹುಡುಗಿಯಂತೆಯೇ ಈಕೆ ಇರಲು ಬಯಸುತ್ತಿದ್ದಾಳೆ ಅಂತ ಜಾನ್‍ಗೆ ತಿಳಿಯುತ್ತದೆ.
ಇತಿಹಾಸ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಆ ಪೇಂಟಿಂಗ್‍ನಲ್ಲಿದ್ದ ಹುಡುಗಿ ತನ್ನ 26ನೇ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋಗಿರುತ್ತಾಳೆ. ಈಗ ನೋಡಿದರೆ ಈಕೆಗೂ 26 ವರ್ಷ ವಯಸ್ಸು!! ಅದೊಂದು ಸಂಜೆ ಈತ ಆಕೆಯನ್ನು ಫಾಲೋ ಮಾಡುವಾಗ ಸಮುದ್ರವೊಂದರ ದಂಡೆಗೆ ಹೋಗಿ ಕೊಂಚ ಹೊತ್ತು ನಿಂತು ನೋಡನೋಡುತ್ತಿದ್ದಂತೆ ನೀರಿಗೆ ಹಾರಿಬಿಡುತ್ತಾಳೆ.....
ನಂತರ......
-------------------------------------
ಹೀಗೆ ಕಥೆ ಸಿಕ್ಕಾಪಟ್ಟೆ ರೋಚಕವಾಗಿದೆ. ಕಥೆಯಲ್ಲಿ ಅನೇಕ ತಿರುವುಗಳಿದೆ. 1954 ರಲ್ಲಿ ಬಿಡುಗಡೆಯಾದ "From Among the Dead" ಅನ್ನುವ ಕಾದಂಬರಿಯೊಂದರ ಸಿನಿಮಾ ರೂಪವೇ "ವರ್ಟಿಗೋ". ಇವತ್ತಿಗೂ ಸಿನಿಮಾ ನೋಡುವಾಗ ರೋಚಕವೆನಿಸುತ್ತದೆ. ನೋಡಿಲ್ಲದಿದ್ದರೆ ನೋಡಿ.
-Santhosh Kumar LM
13-Jan-2023
No comments:
Post a Comment
Please post your comments here.