("ಪಂಜು" ಅಂತರ್ಜಾಲ ತಾಣದಲ್ಲಿ February-4ರಂದು ಪ್ರಕಟವಾದ ನನ್ನ ಚುಟುಕಗಳು
http://www.panjumagazine.com/?p=499)
=========================================
(ಚಿತ್ರಕೃಪೆ:Google)
ಕಣ್ಣೀರುಅತ್ತುಬಿಡು ಎಂದಾಗ,
ಬರದ ಹನಿ,
ಅಳಬೇಡ ತಡೆಯೆಂದಾಗ,
ಉಕ್ಕಿ ಹರಿವ ಧಾರೆ!!
=========================================
ಹೃದಯ
ಇದ್ದಾಗ,
ಕೊಂಚವೂ ಗೋಚರಿಸದ ,
ತನ್ನನ್ನೇ ಕೊಟ್ಟು ಬರಿದಾದ ಮೇಲೆ,
ಭಾರ ತೋರುವ,
ಏಕೈಕ ವೈಚಿತ್ರ್ಯ!!
=========================================
ಕಣ್ಣು
ತೆರೆದಿದ್ದಾಗ
ಇದ್ದುದನ್ನು
ಮಾತ್ರ ತೋರುವ,
ಮುಚ್ಚಿದಾಗ
ಏನೇನನ್ನೋ
ತೋರುವ
ಪ್ರಚೋದಕ!!
=========================================
hahaha lovely each one are awesome :D superb Santhu
ReplyDeleteThanks Ramya:)
ReplyDeleteಮೂರು ಹನಿಗವನಗಳು ನನಗೆ ನೆಚ್ಚಿಗೆಯಾದವು.
ReplyDelete