(ಚಿತ್ರಕೃಪೆ:Google)
ಜನಪ್ರಿಯ
ನಮ್ಮ ನಿಮ್ಮೆಲ್ಲರ
ಜನಪ್ರಿಯ ನಾಯಕ
ಎಂದ ಮೇಲೂ
ನೆರೆದಿದ್ದ ಜನ
ಪಿಸುಗುಟ್ಟಿಕೊಂಡರಂತೆ,
ಯಾರವನು?
===============================
ಸಂಪಾದನೆ
ಕೆಲವರಿಗಂತೂ ಕಷ್ಟದ ಕೂಗು
ಕೇಳುವ ಕಿವಿಗಳಿರದಿದ್ದರೂ,
ಕೆರ ಕಾಯುವವನಿಗೆ
ಕಾಸು ಕೊಡುವ ಕರಗಳಿರುತ್ತವೆ.
ಅದಕಾಗಿಯೇ,
ದೇಗುಲದ ಮುಂದಿನ
ಕೆರ ಕಾಯುವವ
ಭಿಕ್ಷುಕನಿಗಿಂತ ಸಿರಿವಂತ!!
===============================
ನೆನಪು
ಹುಡುಗೀ,
ಹರಿದ ಪುಸ್ತಕದ
ಕಳೆದ ಪುಟಗಳೇ ನೀನು.
ಅಂತ್ಯವಿಲ್ಲದ ಕತೆಗೆ
ಬರೀ ಮುನ್ನುಡಿಯೇ ನೆನಪು!!
===============================
wow loved all of them and the "Nenapu" tumba tumba chenagide :D keep writing you are doing very good
ReplyDelete@Ramya, Thanks:)
ReplyDeleteಜನಪ್ರಿಯ ಸಂಪಾದನೆ ಮತ್ತು ನೆನಪು ಮೂರು ವಿಭಿನ್ನ ಹೂರಣದಲ್ಲಿ ಕಟ್ಟಿಕೊಟ್ಟ ಈ ಪೋಸ್ಟ್ ನನಗೆ ಇಷ್ಟವಾಯ್ತು.
ReplyDeleteಒಳ್ಳೆಯ ಬ್ಲಾಗ್ ನೆಚ್ಚಿಗೆಯಾಯ್ತು ಗೆಳೆಯ.
ಬದರಿ ಸರ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ:)