Saturday, November 10, 2012

ಕಳೆದ ಉಂಗುರ!!


(ಚಿತ್ರಕೃಪೆ:Google)
ಕಳೆದ ಉಂಗುರಕ್ಕೀಗ ಮೂರೇ ವಯಸ್ಸು,
ಬಂಗಾರದ ಬೆಲೆಯೀಗ ಬಾನೆತ್ತರಕ್ಕೆ,
ಖಾಲಿ ಕೈಬೆರಳ ನಡುವಿನಿಂದ ಇಣುಕಿ ನಕ್ಕ ನೆನಪು.
ಇನ್ಯಾರದೋ ಕೈಗಳಲ್ಲಿ ಬರುತಲಿದೆ ಹೊಳಪು.

ಹುಣ್ಣಿಮೆಯ ಹಾದಿಯಲಿ ನಾ ಕಾಲಿಟ್ಟ
 ಹೆಜ್ಜೆಗಳಧೂಳನ್ನೆತ್ತಿ ಹಣೆಗಿಟ್ಟು
 ಮುಂಗೈಗೆ ಮುತ್ತಿಟ್ಟ ಸವಿನೆನಪು.
ಇಂದು ಆಗಸದಲ್ಲಿ ಚಂದ್ರ ಗೈರು ಹಾಜರಿ,
ಜತೆಗೆ ಅವಳೂ!!

ಅಂದು ಅವಳಪ್ಪುಗೆಯಲ್ಲಿ
ನನಗಿತ್ತ ಉಂಗುರ, ಇದ್ದಕ್ಕಿದ್ದಂತೆ ಮಾಯ.
ಕಣ್ಣು ಕುರುಡೋ, ಹೃದಯ ಕುರುಡೋ.
ನನಗಿನಿತು ಸುಳಿವಿಲ್ಲ.

ಜೋಕಾಲಿಯಲ್ಲಿ ಕೈಗಳ ಬೆಸೆದು
ಮುಂಬರುವ ಕನಸುಗಳೊಡನೆ ಜೀಕುವಾಗ
ತೇಲುತ್ತಿದ್ದ ಜಗತ್ತು.
ಬರುಬರುತ್ತಲೇಕೋ ತಲೆಕೆಳಗೆ.
ಮೇಲೆಬಿದ್ದ ಆಕಾಶ.
ಮಂಜಾದ ಕಂಗಳಲಿ ಬರೀ ನಕ್ಷತ್ರ.

ಪ್ರೀತಿ ಜನನಕ್ಕಿರಲಿಲ್ಲ ಒಂದೂ ನೆಪ,
ಅಂತ್ಯದ ಬುಡಕ್ಕೀಗ ನೂರು ಕಾರಣಗಳ ಬುತ್ತಿ.
ಕವಿದ ಕತ್ತಲೆಯೆಲ್ಲ ಕಾಲನ ಕೈಚಳಕವಷ್ಟೇ.
ಮತ್ತೆ ಮತ್ತೆ ಹುಡುಕುತ್ತಿರುವೆ, ಕಳೆದ ಉಂಗೂರಕ್ಕೀಗ.
ಕಾಣಲಾರೆನೆಂಬುದಿದ್ದರೂ ಬಲು ಖಚಿತ.
                                                                       --ಸಂತು

3 comments:

  1. ಬಿಡಿಬಿಡಿಯಾಗಿ ಓದಲು ಖುಷಿಯಾಗಿದೆ.

    ReplyDelete
  2. ತುಂಬಾ ಹಿಡಿಸ್ತು :)

    ReplyDelete
  3. ಈಶ್ವರ ಭಟ್ ರೇ ಹಾಗೂ ವೀರಭದ್ರ ಹೆಗ್ಡೆಯವರೇ,
    ನಿಮ್ಮ ಪ್ರತಿಕ್ರಿಯೆಯಿಂದ ಬಹಳ ಖುಷಿಯಾಯಿತು.
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    ReplyDelete

Please post your comments here.