Saturday, August 14, 2010

ಸ್ವಾತಂತ್ರ್ಯೋತ್ಸವವೂ ಹಬ್ಬವಾಗಬಾರದೇಕೆ ?ಸುಮಾರು ೧೫ ವರ್ಷಗಳ ಹಿಂದಿನ ಮಾತು.

ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.
ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ uniform ಧರಿಸಿ ಹೋಗುವುದೂ ಇಲ್ಲ, uniform ಹಾಕಲೇಬೇಕೆಂಬ ಕಡ್ಡಾಯವೂ ಇಲ್ಲ . ಹಾಗೊಂದು ನಿಯಮವಿದ್ದರೂ ಧರಿಸಲು ಎಲ್ಲರ ಬಳಿಯೂ uniform ಇರುವುದಿಲ್ಲ !!! :)

ಆದರೆ ಆ ದಿನದಂದು ಮಾತ್ರ ಪ್ರತಿಯುಬ್ಬರೂ ತಪ್ಪದೇ uniform ಹಾಕುತ್ತಾರೆ . ಒಗೆದು ಇಸ್ತ್ರಿ ಮಾಡಿದ ಬಿಳಿ uniform ತೊಟ್ಟು ಕೈಯಲ್ಲಿ ಪುಟ್ಟ ತ್ರಿವರ್ಣ ಧ್ವಜ ಹಿಡಿದು ಶಾಲೆಗೆ ಗಾಂಭೀರ್ಯದಿಂದ ಹೊರಟರೆ ಅದು ಒಂದು ರೀತಿಯ ಸಂತೋಷವೇ ಸರಿ.ಹಾಗೆಯೇ ನಗರಗಳ ಹಾಗೆ ಶಾಲೆಯನ್ನು ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಲು ಅಂತ ವಿಶೇಷವಾಗಿ ಸಿಬ್ಬಂದಿಯೇನು ಇರುವುದಿಲ್ಲ. ಹಿಂದಿನ ದಿನವೇ ಪ್ರತಿಯೊಂದು ಕೆಲಸವನ್ನು ಶಾಲೆಯ ಹುಡುಗರೇ ಮಾಡಿ ಮುಗಿಸಿರುತ್ತಾರೆ.
ಒಂದು ವಾರದ ಮುಂಚೆಯಿಂದಲೇ ಕವಾಯತು (march fast) ಮಾಡುವುದನ್ನು ಅಭ್ಯಾಸ ಮಾಡಿಸಲಾಗಿರುತ್ತದೆ. ಪ್ರತೀ , ಮಾಸ್ತರರೂ ವಿಧ್ಯಾರ್ಥಿಗಳ ಮುನ್ನವೇ ಬೇರೆಯೂರುಗಳಿಂದ ಬಂದಿಳಿದಿರುತ್ತಾರೆ.

ಮೊದಲು ಕವಾಯತು ,ನಂತರ ಧ್ವಜಾರೋಹಣ , ಜತೆಜತೆಗೆ ಜನಗಣಮನ , ಧ್ವಜಗೀತೆ , ಹಾಡಿ ಮುಗಿಸುವ ಹೊತ್ತಿಗೆ ಪ್ರತಿ ಪುಟ್ಟ ಹೃದಯದಲ್ಲಿ ದೇಶಪ್ರೇಮ ಉಕ್ಕಿ ಹರಿದಿರುತ್ತದೆ.

ಕೊನೆಗೆ ಎಲ್ಲರ ಬಾಯಿಗೂ ಸಿಹಿ, ಅತಿಥಿಗಳಿಂದ ದೇಶಾಭಿಮಾನದ ಭಾಷಣ , ನಡುನಡುವೆ ಸಾಂಸ್ಕೃತಿಕ ಕಾರ್ಯಕ್ರಮ, ನೆರೆದ ಹಳ್ಳಿ ಜನರಿಂದ ಹರ್ಷೋದ್ಗಾರ , ಕರತಾಡನ.

ಕೊನೆಗೆ ಒಟ್ಟೊಟ್ಟಿಗೆ ಊರ ತುಂಬ ಮೆರವಣಿಗೆ , ಕೈ ಕೈ ಹಿಡಿದು ಹೋರಾಟ ಮಕ್ಕಳ ಬಾಯಿಂದ ದೇಶದ ಬಗ್ಗೆ ಘೋಷಣೆ ....

ಭಾರತ್ ಮಾತ ಕೀ ಜೈ.........ಮಹಾತ್ಮ ಗಾಂಧೀ ಕೀ ಜೈ........

ಮನೆಯಿಂದ ಹೊರಬಂದು ತಮ್ಮ ಮಕ್ಕಳ ನೋಡುವ ಜನರ ತುಟಿಯಲ್ಲಿ ಕಿರುನಗೆ , ತಡವಾಗಿ ಎದ್ದು ದಾರಿಬದಿಯ ಅಂಗಡಿಯಲ್ಲಿ ಟೀ ಕುಡಿಯುತ್ತ ನಿಂತ ಜನರ ಮನದಲ್ಲಿ ಏನೋ ಅಳುಕು , ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ತಾವು ಪಾಲ್ಗೊಳ್ಳಲಿಲ್ಲವೆಂದು ಅನಿಸಿದಾಗ ನಾಚಿಕೆ....

ಮಕ್ಕಳ ಮನಸ್ಸಿನಲ್ಲಂತೂ ಸ್ವಾತಂತ್ರ್ಯ ದಿನಾಚರಣೆ ಹಬ್ಬವೋ ಹಬ್ಬ. ........

......................ಮತ್ತೆ ವಾಸ್ತವಕ್ಕೆ ಬನ್ನಿ ,

ಏಕಾದರೂ ಈ Independence day, weekend ನಲ್ಲಿ ಬಂತು ಎನ್ನುವ ಬೇಸರ , ಇಲ್ಲದಿದ್ದರೆ ಒಂದು extra Holiday ನಾದ್ರೂ ಸಿಗ್ತಿತ್ತು ಅನ್ನೋ ಮನೋಭಾವ...

ಸ್ವಾತಂತ್ರ್ಯ ದಿನಾಚರಣೆಯಂತು ಶಾಲೆಯ ದಿನಗಳಲ್ಲಿ ಮಾತ್ರ ಬರುವ ಒಂದು ದಿನ ಎಂಬ ಅನಿಸಿಕೆ . ಅದರ ಆಚರಣೆಯಂತು ಕನಸು, ಅಥವಾ ಕಳೆದ ದಿನಗಳ ನೆನಪು.

ಈಗ Aug-15 ರ ದಿನ ಏಳುವಾಗಲೇ ಮಧ್ಯಾಹ್ನ ದಾಟಿರುತ್ತದೆ. ಎದ್ದ ಕೂಡಲೇ ಕೈಗೆ tv remote ಬಂದಿರುತ್ತದೆ. TV channelಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಹಿರಿಯರು,ರಾಜಕಾರಣಿಗಳು , ಸಿನಿಮಾ ತಾರೆಯರು ಏನು ಹೇಳುತ್ತಾರೆ ಎಂದು ನೋಡುನೋಡುತ್ತಲೇ ಆ ದಿನ ಮುಗಿದು ಹೋಗಿರುತ್ತದೆ.

ಎಂತಹ ವಿಪರ್ಯಾಸವಲ್ಲವೇ?

ಇದೆe ಬೆಂಗಳೂರಿನಲ್ಲಿ ನಮ್ಮ ಬೀದಿಯಲ್ಲಿರುವ ಮನೆಯಾತನೊಬ್ಬ Aug -15 ಬಂತೆಂದರೆ ಅಕ್ಕಪಕ್ಕದ ಮನೆಯ ಹಿರಿಯ ಕಿರಿಯರೆನ್ನೆಲ್ಲ ಸೇರಿಸಿ ತನ್ನ ಮನೆಯ ಮಹಡಿಯ ಮೇಲೆ ಬೆಳ್ಳಂಬೆಳಗ್ಗೆ ಧ್ವಜ ಹಾರಿಸಿ, ಪ್ರತಿಯೊಬ್ಬರ ಕೈಯಲ್ಲೂ ಧ್ವಜಕ್ಕೆ salute ಮಾಡಿಸಿ ,ಜನಗಣಮನ ಹಾಡಿಸಿ ಪ್ರತಿಯೊಬ್ಬರಿಗೂ ಸಿಹಿ ಹಂಚುತ್ತಾನೆ!!!!

"ಬರೀ aug-15 ರಂದೇ ಏಕೆ ನಾವು ದೇಶಪ್ರೇಮ ತೋರಿಸಬೇಕು, ವರ್ಷದ ಎಲ್ಲ ದಿನವೂ ನಾವು Independence Day ಆಚರಿಸುತ್ತೇವೆ" ಅಂತ ಉಡಾಫೆಯ ಮಾತು ಹೇಳುವ ಅನೇಕರು atleast ಒಂದು ಬಾರಿಯಾದರೂ ತಮ್ಮ lifeನಲ್ಲಿ ಜನಗಣಮನ ಹಾಡಿರುವುದಿಲ್ಲ.

ಇಂಥವರ ಮಧ್ಯದಲ್ಲೂ ಮನೆಯಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಹಿಹಂಚಿ, ಹಬ್ಬದಂತೆ ಆಚರಿಸುವ "ಆ" ವ್ಯಕ್ತಿ ನನಗೆ ನಿಜವಾದ "ಹೀರೋ"ನಂತೆ ಕಾಣಿಸುತ್ತಾನೆ.

ನೀವೇನಂತೀರಿ,
Jai Hind,Jai Bharath matha....

ನಿಮ್ಮವನು
Santhu

2 comments:

 1. ಶಾಂತೂ ಅವರೇ
  ಇಷ್ಟೆಲ್ಲಾ ಮಾಡುವ ವ್ಯಕ್ತಿಯ ಹೆಸರನ್ನೂ ನೀವು ಬರೆಯಲಿಲ್ಲಾ
  ಅದೇಕೋ?

  ReplyDelete
 2. ಗೋಪಿನಾಥ್ ರಾವ್ ರವರೆ,
  ತಮ್ಮ ಪ್ರತಿಕ್ರಿಯೆಗೆ ನನ್ನ ವಂದನೆಗಳು.
  ನಾನಿಲ್ಲಿ ಆ ವ್ಯಕ್ತಿಯ ಹೆಸರನ್ನು ಉಲ್ಲೇಖ ಮಾಡದಿದ್ದುದರ ಉದ್ದೇಶ ನಾವು ಬರಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಮಾತ್ರ ಪರಿಗಣಿಸೋಣ ಎಂಬ ಆಶಯದೊಂದಿಗೆ.

  ReplyDelete

Please post your comments here.