There was an error in this gadget

Sunday, January 20, 2013

ಜನಪ್ರಿಯ (ಚುಟುಕಗಳು)



                                                                                                                                             (ಚಿತ್ರಕೃಪೆ:Google)
ಜನಪ್ರಿಯ


ನಮ್ಮ ನಿಮ್ಮೆಲ್ಲರ
ಜನಪ್ರಿಯ ನಾಯಕ
ಎಂದ ಮೇಲೂ
ನೆರೆದಿದ್ದ ಜನ
ಪಿಸುಗುಟ್ಟಿಕೊಂಡರಂತೆ,
ಯಾರವನು?

===============================

ಸಂಪಾದನೆ

ಕೆಲವರಿಗಂತೂ ಕಷ್ಟದ ಕೂಗು
ಕೇಳುವ ಕಿವಿಗಳಿರದಿದ್ದರೂ,
ಕೆರ ಕಾಯುವವನಿಗೆ
ಕಾಸು ಕೊಡುವ ಕರಗಳಿರುತ್ತವೆ.

ಅದಕಾಗಿಯೇ,
ದೇಗುಲದ ಮುಂದಿನ
ಕೆರ ಕಾಯುವವ
ಭಿಕ್ಷುಕನಿಗಿಂತ ಸಿರಿವಂತ!!

===============================

ನೆನಪು

ಹುಡುಗೀ,
ಹರಿದ ಪುಸ್ತಕದ
ಕಳೆದ ಪುಟಗಳೇ ನೀನು.
ಅಂತ್ಯವಿಲ್ಲದ ಕತೆಗೆ
ಬರೀ ಮುನ್ನುಡಿಯೇ ನೆನಪು!!

===============================

4 comments:

  1. wow loved all of them and the "Nenapu" tumba tumba chenagide :D keep writing you are doing very good

    ReplyDelete
  2. ಜನಪ್ರಿಯ ಸಂಪಾದನೆ ಮತ್ತು ನೆನಪು ಮೂರು ವಿಭಿನ್ನ ಹೂರಣದಲ್ಲಿ ಕಟ್ಟಿಕೊಟ್ಟ ಈ ಪೋಸ್ಟ್ ನನಗೆ ಇಷ್ಟವಾಯ್ತು.

    ಒಳ್ಳೆಯ ಬ್ಲಾಗ್ ನೆಚ್ಚಿಗೆಯಾಯ್ತು ಗೆಳೆಯ.

    ReplyDelete
  3. ಬದರಿ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
    ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ:)

    ReplyDelete

Please post your comments here.