Sunday, February 28, 2010

ಅದೊಂದು ದಿನ...ಬರೋಬ್ಬರಿ 8 ತಾಸು ಕಂಪ್ಯೂಟರಿನ ಮುಂದೆ ಕೂತು ದಣಿದಿದ್ದ ದೇಹ ಮತ್ತು ಮನಸ್ಸು ಮನೆಗೆ ತಲುಪಿಸುವ ಕ್ಯಾಬಿನಲ್ಲಿ ಕುಳಿತ ತಕ್ಷಣ ಕಣ್ಣು ಮುಚ್ಚುವಂತೆ ಮಾಡಿತ್ತು. ಮಧ್ಯಾಹ್ನ ಫೋನಾಯಿಸಿದಾಗ ನನ್ನಾಕೆಯಾಡಿದ ಮಾತುಗಳು ಒಂದೊಂದಾಗಿ ಮನಸ್ಸಿನಲ್ಲಿ ಬರಲಾರಂಭಿಸಿದವು.
------*---------*---------*---------*-------*-------*--------*--------*-----*
ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಕರ್ಮಕ್ಕೆ love marriage ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ atleast 10 ಗಂಟೆ ಫೋನಿನಲ್ಲೇ ಪ್ರಪಂಚ.
ಕೂತಿದ್ದರೂ ನಿಂತಿದ್ದರೂ ಮೇಲೆ smsಗಳ ಮೇಲೆ sms.
ಪ್ರೀತಿ ಮಾತು, ಆಗ ನೋಡುತ್ತಾ ಇದ್ದ movies , ಆಡ್ತಾ ಇದ್ದ ಹರಟೆ , ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ letter , ಕಳಿಸ್ತಾ ಇದ್ದ e -mails , greetings , ಆಗಾಗ ಕೊಡ್ತಾ ಇದ್ದ gifts .... ಪ್ರತಿಯೊಂದು ಅದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು.
ಈಗಂತೂ ನಿಂಗೆ ಆಫೀಸೇ ಪ್ರಪಂಚ , ಅಪ್ಪ, ಅಮ್ಮ , ಹೆಂಡತಿ, ಮಕ್ಕಳು ಎಲ್ಲ.
ಆಫೀಸಿನಲ್ಲೇ ಒಂದು ರೂಮು ಕೊಟ್ರೆ ಅಲ್ಲೇ ಮಲಗಿಬಿಡು, ನಿನಗ್ಯಾಕೆ ಸಂಸಾರ ಎಲ್ಲ?!!
Atleast ಊಟ ಮಾಡಿದ್ಯ ಅಂತ ಕೇಳಲಿಕ್ಕಾದರು ಒಂದು ಫೋನ್ ಬೇಡ್ವ? ಅಷ್ಟಕ್ಕೂ ನೀನೋಬ್ಬನೇನ ಕೆಲಸ ಮಾಡೋದು. ನಿಮ್ಮ ಮ್ಯಾನೇಜರ್ ಗಳಿಗೇನು ಮದ್ವೇನೆ ಆಗಿಲ್ವಾ? .............

ಅಮ್ಮಾ.... ಬೈಗುಳದ ಮೇಲೆ ಬೈಗುಳ , ಇವಳ ಬಾಯಿಗೆ ಯಾರಾದ್ರೂ ಬೆರಳು ಹಾಕ್ಕಿದ್ರೋ ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಾ ಕೇಳಿಸಿಕೊಳ್ಳುತ್ತಾ ಇದ್ದೆ.
ನಂಗೊತ್ತು ಮದ್ಯದಲ್ಲಿ ಏನಾದ್ರು ಹೇಳಿದ್ರೆ ಬೈಗುಳದ ಪಟ್ಟಿ ಇನ್ನೂ ಜಾಸ್ತಿ ಆಗುತ್ತೆ ಅಂತ.
ಇಂಥ timeನಲ್ಲಿನೇ ಗಾಂಧೀ ತಾತಂಗೆ thanks ಹೇಳ್ಬೇಕು ಅನ್ಸೋದು. ಕೆಟ್ಟದ್ದನ್ನ ಕೇಳಬಾರದು ಅಂತ ಹೇಳಿ ಕೊಟ್ಟಿದ್ದಾರಲ್ಲ ಅದಕ್ಕೆ!!!
ಬರೋಬ್ಬರಿ 10 ನಿಮಿಷ ಆದ ಮೇಲೆ ಅತ್ತ ಕಡೆಯಿಂದ "ಲಕ್ " ಅಂತ phone ನೆಲಕ್ಕೆ ಕುಕ್ಕಿದ ಸದ್ದು........ಬದುಕಿದೆಯಾ ಬಡಜೀವವೇ..!!! :)
ಮತ್ತೆ ಚೇರಿನಲ್ಲಿ ಕೂತೆನಾದರೂ ಮನಸ್ಸು ಮಾತ್ರ ಗಿರಾಕಿ ಹೊಡಿತಾನೆ ಇತ್ತು. ಎಷ್ಟೇ ಆದರೂ MNCಗಳ ಕತೆ ನೋಡಿ, ನೀವು ಸಾಯೋ ಒಂದು ಕ್ಷಣದ ಮುಂಚೆ ಅಲ್ಲಿದ್ರೂ ಕೆಲಸ ಮಾಡುತ್ತಾನೆ ಇರಬೇಕು.
------*---------*---------*---------*-------*-------*--------*--------*-----*
"ಯಾಕ್ ಸರ್ ಸೈಲೆಂಟ್ ಆಗಿ ಕೂತಿದ್ದೀರಾ ಇವತ್ತು? ನಿಮ್ಮ ಮ್ಯಾನೇಜರ್ ಏನಾದ್ರೂ ಬೈದ್ರಾ ? " ನನ್ನ cabmate ಪ್ರಶ್ನೆ. "ನನ್ನ ಹೆಂಡತಿನೇ ಕಣಪ್ಪ ನಂಗೆ ಮ್ಯಾನೇಜರ್, ಅವ್ಳು ಬೈದೆ ಇನ್ಯಾವ ನನ್ ಮಗ ಬೈತಾನೆ ನಂಗೆ?" ಹಾಗೆಂದು ಹೇಳಬೇಕೆಂದುಕೊಂಡವನು ಕೊನೆ ಕ್ಷಣದಲ್ಲಿ ಕಷ್ಟಪಟ್ಟು ತಡೆದುಕೊಂಡೆ.

ದಿನ ಪೂರ್ತಿ ನನ್ನ ಮೂಡ್ ಹಾಳು ಮಾಡಿದ ಆಕೇನ ಸರಿಯಾಗಿ ತರಾಟೆಗೆ ತಗೋಬೇಕು ಅಂತ ಯೋಚಿಸೋಕೆ ಶುರು ಮಾಡಿದೆ.

ಅಮ್ಮಣ್ಣಿ, ಕಾಲೇಜಿನಲ್ಲಿ ನಿಂಗೆ ಫೋನ್ ಮಾಡ್ತಾ ನಿನ್ ಹಿಂದೆ ಅಲಿತಿದ್ದಾಗ ದುಡ್ಡು ಕೊಡ್ತಾ ಇದ್ದೋರು ನಮ್ಮಪ್ಪ. ಆದ್ರೆ ಈಗ ಕಂಪನೀಲಿ ಸುಮ್ನೆ ಕೂರಿಸಿ ದುಡ್ಡು ಕೊಟ್ಟು ಕಳಿಸೋಕೆ ಅದೇನು ನಮ್ಮ ಮಾವನ ಮನೆ ಅಲ್ವಲ್ಲ .

ನೀನೆ ಸ್ವಲ್ಪ ಯೋಚನೆ ಮಾಡು. ಯಾವಾಗ್ಲೂ ನಿನ್ನ ಹಿಂದೆ ಫೋನ್ ಮಾಡ್ತಾ ಕೂತಿದ್ರೆ ನನ್ನ ಆಫೀಸ್ ಕೆಲಸ ಯಾರು ಮಾಡ್ತಾರೆ. ಮುಂಚೆನೇ ಅಲ್ಲಿ ನಮ್ಮ ಕೆಲಸದ ಪಾಡು ನಾಯಿಪಾಡು.
ಅದನ್ನ ಮುಗಿಸೋಕೆ ಬ್ರಹ್ಮ ಇನ್ಮೇಲೆ ದಿನಕ್ಕೆ 48 ಗಂಟೆ ಅಂತ ಮಾಡ್ಬೇಕು. ನಾನು ಸೇರಿದ ಮೇಲೆ ಬಂದು ಕೆಲಸಕ್ಕೆ ಸೇರಿದ juniors ಎಲ್ಲ ಕೆಲಸದಲ್ಲಿ ಒಳ್ಳೆ ಹೆಸರು ತಗೊಂಡು ವಿದೇಶಕ್ಕೆಲ್ಲ ಹೋಗಿ ಬಂದಿದ್ದಾರೆ.
ನಾನು family ಅಂತ ಯಾವಾಗಲು ನಿನ್ನ ಬಗ್ಗೆನೇ ಯೋಚನೆ ಮಾಡ್ತಾ ಕೂತಿದ್ರೆ ಯಾರು ಕೊಡ್ತಾರೆ ತಿನ್ನೋಕೆ ಅನ್ನ. ಇಷ್ಟು ದಿನ ಕೆಲಸ ಮಾಡಿದ್ರು ಸಾಲ ಅಂತ ಒಂಚೂರು ಕಮ್ಮಿ ಆಗಿಲ್ಲ . ಅಂಥದ್ದರಲ್ಲಿ ಕೆಲಸ ಏನಾದ್ರು ಹೋದ್ರೆ ಇನ್ಯಾರು ಕೈ ಹಿಡಿತಾರೆ. ನೀವಾದ್ರು ಹೆಂಗಸರು. ಕೆಲಸಕ್ಕೆ ಹೋಗಿ ಅಥವಾ ಬಿಡಿ ,ಯಾರು ಕೇಳಲ್ಲ. ನಮ್ಮ ಗಂಡು ಜನ್ಮ, ಕುಂತರೂ ಬೈತಾರೆ, ನಿಂತರೂ ಬೈತಾರೆ.

ನೋಡು ನನ್ನ life ನಲ್ಲಿ ನಂಗೆ priority, ಗುರಿ ಅಂತ ಏನೇನೋ ಇದೆ. ಅದನ್ನ ಸಾಧಿಸೋವರೆಗೂ ನೀನೆ ಅಲ್ಲ ನಿಮ್ಮಪ್ಪ, ನಿಮ್ಮಪ್ಪ, ಯಾರು ಹೇಳಿದ್ರು ಯಾರ ಮಾತೂ ಕೇಳೋನಲ್ಲ ನಾನು. ನನ್ ಗುರಿ ತಲುಪೋವರೆಗೂ ನನ್ ಪಾಡಿಗೆ ನನ್ ಕೆಲಸ ಮಾಡುತ್ತಾನೆ ಇರ್ತೀನಿ. ಮನಸ್ಸಿಗೆ phone ಮಾಡಬೇಕು ಅಂತ ಅನ್ಸಿದ್ರೆ ಮಾಡ್ತೀನಿ. ಅದು ಬಿಟ್ಟು ನೀನು ಇಷ್ಟು ಹೊತ್ತಿಗೇ phone ಮಾಡ್ಬೇಕು, ಇಷ್ಟು ಸಲ ದಿನಕ್ಕೆ phone ಮಾಡಲೇಬೇಕು ಅಂತ ನೀನು ಧಮಕಿ ಹಾಕಿದ್ರೆ ಕೇಳೋ ಮನುಷ್ಯಾನೇ ಅಲ್ಲ ನಾನು.

ಅಷ್ಟಕ್ಕೂನಿನ್ನ ಮದ್ವೆ ಅದ ಮೇಲೆ ನನ್ನ ಗೆಳೆಯರನ್ನ ಭೇಟಿ ಮಾಡೋದೇ ಬಿಟ್ಟುಬಿಟ್ಟಿದ್ದೀನಿ. ಅದನ್ನೆಲ್ಲ ಎಲ್ಲಿ ನೀನು ತಲೆಗೆ ಹಾಕೊಳ್ತಿಯೋ ದೇವರಿಗೆ ಗೊತ್ತು. ನಿನ್ ಬುದ್ದಿ ಎಲ್ಲ ಏನಿದ್ರು ಬಾವಿಯೊಳಗಿನ ಕಪ್ಪೆ ಹಾಗೆ ಅಷ್ಟೇ, ಪ್ರಪಂಚದ ಜ್ಞಾನನೇ ನಿನಗೆ ಇಲ್ಲ....

ನೀನು ಹೀಗೆ ಆಡ್ತಾ ಇರೋದ್ರಿಂದ office ನಲ್ಲಿ ಮಾಡೋ ಕೆಲಸಾನು ಮಾಡೋಕೆ ನಂಗೆ ಅಗ್ತಾ ಇಲ್ಲ. ಹಿಂಗೆ ಜಗಳ ಆಡ್ತಾ ಇರು, ಮಾಡೋ ಫೋನ್ ಅನ್ನು ಮಾಡಲ್ಲ ಅಷ್ಟೇನೇ..
------*---------*---------*---------*-------*-------*--------*--------*-----*
"ಸರ್ ಮನೆ ಬಂತು ಇಳ್ಕೋಳಿ ಸರ್" ಕ್ಯಾಬ್ ಡ್ರೈವರ್ ಅಂದ.
ತಟ್ಟನೆ ಯೋಚನಾ ಲಹರಿಯಿಂದ ಎದ್ದು, ಕ್ಯಾಬ್ ಇಳಿದೆ.

ಮನೆಯೊಳಗೇ ಕಾಲಿಟ್ಟವನಿಗೆ "ಮುಖ ತೊಳೆದುಕೊಂಡು ಬನ್ನಿ ಕಾಫಿ ಕೊಡುತ್ತೇನೆ " ಎಂದವಳ ಧ್ವನಿ ಕೇಳಿಸಿತು. ಅದೇ ಕಗ್ಗಂಟು ಮುಖ.
ಕಾಫಿ ಹೀರುತ್ತಾ ಕೂತವನು ಅಲ್ಲೇ ಇದ್ದ ತೊಟ್ಟಿಲ ಒಳಗೆ ಕಣ್ಣಾಯಿಸಿದೆ.

ದುಂಡು ಕಂಗಳ ಪುಟ್ಟಿಯ ಮುಗುಳ್ನಗು ನನ್ನನ್ನ ಅಯಸ್ಕಾಂತದಂತೆ ಬರಸೆಳೆಯಿತು.

ಎತ್ತಿ ಎದೆಗಾನಿಸಿಕೊಂಡವನ ಮುಖದ ಮೇಲೆಲ್ಲಾ ಪುಟ್ಟಿಯ ಪುಟ್ಟ ಕೈಯಾಟ.

"ಓಹೋ ನೋಡು, ಅವರಪ್ಪನ ಮಗಳೇ ಅವಳು, ಅವರು ಬರೋ ಸಮಯ ಅದ ತಕ್ಷಣ ಹೇಗೆ ಅಳೋದನ್ನೆಲ್ಲ ನಿಲ್ಲಿಸಿ ಕುಣಿಯೋಕೆ ಶುರು ಮಾಡಿದಾಳೆ,, " ಮತ್ತೆ ಅವಳಮ್ಮನ ಮೂದಲಿಕೆ.
ಕಿಲಕಿಲ ನಕ್ಕವಳ ಮೊಗದಲ್ಲಿ ಬಂಗಾರದ ಮಿಂಚು..
ಅವಳೊಟ್ಟಿಗೆ ಆಡುತ್ತ , ಮಾತನಾಡುತ್ತ ಮೂಕಭಾಷೆಗೆ ಪ್ರತಿಕ್ರಿಯಿಸುತ್ತಾ ಕುಳಿತೆ.

ಎಷ್ಟೇ ನೆನೆಸಿಕೊಂಡರೂ ಏನೋ ಮರೆತಿದ್ದು ನೆನಪಾಗಲೇ ಇಲ್ಲ ...............!!!!!??????!!!!!!!

ನಿಮ್ಮವನು,
Santhu

10 comments:

 1. Sakkattagide..... madve adre ide golu alva?

  ReplyDelete
 2. maduve adavaru nodi samadana madkolii....
  agbeku antha irovru .. hope for the best :-)

  ReplyDelete
 3. dude,u r a genius man. u hve put complex stuffs in life in such simple words :-)))
  Hats off 2 ur depiction!!!

  ReplyDelete
 4. Hi Friends,
  thanks for your comments. keep those feedbacks coming in for my posts:)

  --santhu

  ReplyDelete
 5. ಸಂತೋಷ ರೆ,

  ಬೀಸುವ ದೊಣ್ಣೆಯಿಂದ ಪಾರಾದರೆ ನೂರು ವರುಷ ಆಯಸ್ಸು ಎಂಬ ನಾನ್ನುಡಿಯಂತೆ ನಿಮ್ಮ ಯಜಮಾನರು ಬೀಸುವ ಲಟ್ಟಣಿಗೆಯಿಂದ ಪಾರಾದರೆ ಸಾವಿರ ವರುಷ ಆಯಸ್ಸು ಪಡೆದಂತೆ, ಆದಷ್ಟು ಬೇಗ ಪಾರಾಗಿ, ಜನ್ಮ ಜನ್ಮಾನ್ತರದಲ್ಲೂ ನೀವೇ ನಿಮ್ಮ ಯಜಮಾನರಿಗೆ ವರಾನ್ವಿತರಾಗಿ, ಇದೆ ನನ್ನ ಸದಾಶಯ ...ನೀವು ನಿಮ್ಮ ಯಜಮಾನರಿಗೆ ತೋರಿಸದೆ ಇದ್ದಿದ್ದರೂ ಅವರ ಕಾರ್ಯಕುಶಲತೆಯಿಂದ ಕಂಡು ಹಿಡಿಯುತ್ತಿದ್ದರು, ನಿಮ್ಮವರು ಅಂತ ಅಲ್ಲ ಸಕಲ ವರಾನ್ವಿತ ಯಜಮಾನರೆಲ್ಲ (ಹೆಂಡತಿಯರು) ಕಂಡು ಹಿಡಿಯುತ್ತಿದ್ದರು ನಮ್ಮ ನಮ್ಮ ಕಾರ್ಯ ವೈಖರಿಯನ್ನು ಕಂಡು . ಅಲ್ಲವೇ?

  ಒಳ್ಳೆಯ ಲಲಿತ ಪ್ರಬಂಧ, ಬರೆಯುತ್ತಿರಿ ಹೀಗೆ.

  ಸಂದೀಪ್ ಶರ್ಮ

  ReplyDelete
 6. macha, prioity familyge kodappa... kelsa idalla innodu sigutte, hogutte, family matra onde kano...

  ReplyDelete
 7. manadalada mathanna thumba chanage bardedya kano
  Wish you all the very best......

  ReplyDelete
 8. maga nin inda kaiyodu tumba ide kano .... e saalugala hindina artha tumba chenagide ... nin yenadru film industry alididre director agi bidthide.....plz post some shayaris which u used to tel durin our training days ....... i really loved those ones...

  ReplyDelete
 9. Awesome post maga... Just a glimpse of how things would be in the future for rest of us... But really, the moment there is no one to scold us is the day when we are all alone in this world... Isn't it?

  ReplyDelete

Please post your comments here.